Skip to main content

PM PVISHWAKARMA SCHEME -ಪಿಎಂ ವಿಶ್ವಕರ್ಮ ಯೋಜನೆ; ವಿವಿಧ ಸೌಲಭ್ಯ ಪಡೆಯಲು ಅರ್ಹತೆಗಳು.

 

ಪಿಎಂ ವಿಶ್ವಕರ್ಮ ಯೋಜನೆ; ವಿವಿಧ ಸೌಲಭ್ಯ ಪಡೆಯಲು ಅರ್ಹತೆಗಳು


 ಕೇಂದ್ರ ಸರ್ಕಾರದ ಪಿಎಂ-ವಿಶ್ವಕರ್ಮ ಯೋಜನೆಯಡಿ ವಿವಿಧ ಸೌಲಭ್ಯಗಳಿಗಾಗಿ ಒಟ್ಟು 18 ಚಟುವಟಿಕೆಗಳಲ್ಲಿ ತೊಡಗಿಸಿಕೊಂಡಿರುವ ಅರ್ಹ ಕುಶಲಕರ್ಮಿಗಳಿಂದ ಅರ್ಜಿಗಳನ್ನು ಆಹ್ವಾನಿಸಲಾಗಿದೆ. ಅರ್ಹತೆಗಳು, ಸಿಗುವ ಸೌಲಭ್ಯಗಳ ಮಾಹಿತಿ ಇಲ್ಲಿದೆ

ಪಿಎಂ ವಿಶ್ವಕರ್ಮ ಪ್ರಮಾಣ ಪತ್ರ, ಐಡಿ ಕಾರ್ಡ್, ಕೌಶಲ್ಯಾಭಿವೃದ್ಧಿ, ಉಪಕರಣಗಳಿಗೆ ಪ್ರೋತ್ಸಾಹ, ಕ್ರೇಡಿಟ್ ಸೌಲಭ್ಯ, ಡಿಜಿಟಲ್ ವ್ಯವಹಾರಕ್ಕೆ ಪ್ರೋತ್ಸಾಹ, ಮಾರುಕಟ್ಟೆ ಬೆಂಬಲ ಸೌಲಭ್ಯವನ್ನು ಯೋಜನೆಯಡಿ ನೀಡಲಾಗುತ್ತದೆ.

ಯೋಜನೆಯು 18 ರೀತಿಯ ವ್ಯಾಪಾರಗಳಲ್ಲಿ ತೊಡಗಿರುವ ಕರಕುಶಲಿಗರು ಮತ್ತು ಕುಶಲಕರ್ಮಿಗಳನ್ನು ಒಳಗೊಂಡಿದೆ. ಬಡಗಿ, ದೋಣಿ ತಯಾರಕರು, ಶಸ್ತ್ರಾಸ್ತ್ರ ತಯಾರಿಸುವವರು (ಆರ್ಮರ್), ಕಮ್ಮಾರರು, ಸುತ್ತಿಗೆ ಮತ್ತು ಟೂಲ್ ಕಿಟ್ ಮಾಡುವವರು, ಬೀಗ ತಯಾರಿಸುವವರು, ಅಕ್ಕಸಾಲಿಗರು, ಕುಂಬಾರರು, ಶಿಲ್ಪಿಗಳು, ಕಲ್ಲು ಒಡೆಯುವವರು, ಚಮ್ಮಾರರು, ಮೇಸ್ತ್ರಿ, ಬುಟ್ಟಿ/ ಚಾಪೆ/ ಪೊರಕೆ/ ಸೆಣಬು ನೇಯುವವರು, ಸಾಂಪ್ರದಾಯಿಕ ಗೊಂಬೆ ಮತ್ತು ಆಟಿಕೆ ತಯಾರಕರು, ಕ್ಷೌರಿಕರು, ಹೂ ಮಾಲೆ ತಯಾರಕರು, ಮಡಿವಾಳರು, ಟೈಲರ್, ಮೀನಿನ ಬಲೆಯ ತಯಾರಕರು ಅರ್ಹರು.

ಮೇಲಿನ ಚಟುವಟಿಕೆಗಳಲ್ಲಿ ತೊಡಗಿರುವ ಕುಶಲಕರ್ಮಿಗಳು ಗ್ರಾಮ ಪಂಚಾಯತಿ ಮಟ್ಟದಲ್ಲಿರುವ ಸಾಮಾನ್ಯ ಸೇವಾ ಕೇಂದ್ರದಲ್ಲಿ ನೋಂದಣಿ ಮಾಡಿಕೊಳ್ಳಬಹುದಾಗಿದೆ. ಆಸಕ್ತರು ಹೆಚ್ಚಿನ ಮಾಹಿತಿಗಾಗಿ www.pmvishwakarma.gov.inಗೆ ಭೇಟಿ ನೀಡಿ ಪಿಎಂ ವಿಶ್ವಕರ್ಮ ಯೋಜನೆಯ ಮಾರ್ಗಸೂಚಿಗಳನ್ನು ನೋಡಬಹುದು. ಅರ್ಹತೆಗಳು; ಕುಶಲಕರ್ಮಿಗಳು 18 ವೃತ್ತಿಗಳಲ್ಲಿ ಯಾವುದಾದರೂ ಒಂದರಲ್ಲಿ ಸ್ವಯಂ ಉದ್ಯೋಗಿಯಾಗಿರಬೇಕು. 18 ವರ್ಷ ಮೇಲ್ಪಟ್ಟವರಾಗಿರಬೇಕು. ಒಂದು ಕುಟುಂಬದಲ್ಲಿ ಒಬ್ಬ ಸದಸ್ಯರು ಮಾತ್ರ ನೋಂದಣಿಗೆ ಅರ್ಹರು (ಕುಟುಂಬದಲ್ಲಿನ ಗಂಡ, ಹೆಂಡತಿ ಮತ್ತು ಮದುವೆಯಾಗದ ಮಕ್ಕಳು), ಕುಟುಂಬದಲ್ಲಿ ಯಾವುದೇ ಸದಸ್ಯರು ಸರ್ಕಾರಿ ಕೆಲಸದಲ್ಲಿರಬಾರದು. ಕುಶಲಕರ್ಮಿಗಳು ಮುದ್ರಾ ಮತ್ತು ಸ್ವ-ನಿಧಿ ಸಾಲ ಪಡೆದವರು ಸಾಲವನ್ನು ಹಿಂದಿರುಗಿಸಿರುವವರನ್ನು ಹೊರತುಪಡಿಸಿ ಬೇರೆ ಯಾವುದೇ ತರಹ ಸಾಲವನ್ನು ಪಡೆದಿರಬಾರದು.

ಕುಶಲಕರ್ಮಿಗಳ ನೋಂದಣಿಯಾದ ನಂತರ ಜಿಲ್ಲಾ ಮಟ್ಟದ ಸಮಿತಿಯಿಂದ ಕುಶಲಕರ್ಮಿ ಎಂದು ದೃಢೀಕರಿಸಿದ ನಂತರ 5 ರಿಂದ 7 ದಿನಗಳ ಕಾಲ ತರಬೇತಿಯನ್ನು ನೀಡಲಾಗುವುದು. ತರಬೇತಿ ಅವಧಿಯಲ್ಲಿ ಗೌರವಧನ ಮತ್ತು ಇತರೆ ಭತ್ಯೆ ನೀಡಲಾಗುವುದು. ತರಬೇತಿಯ ನಂತರ ಪ್ರಮಾಣಪತ್ರದೊಂದಿಗೆ ರೂ.15000 ಬೆಲೆಬಾಳುವ ಉಪಕರಣವನ್ನು ನೀಡಲಾಗುವುದು. ನಂತರ ಶೇ.5 ಬಡ್ಡಿ ದರದಲ್ಲಿ ರೂ.1,00,000 ಸಾಲವಾಗಿ ನೀಡಲಾಗುವುದು. ತದನಂತರ 15 ದಿನಗಳವರೆಗೆ ಉನ್ನತ ಮಟ್ಟದ ತರಬೇತಿಯನ್ನು ನೀಡಿ ಈಗಾಗಲೇ ಪಡೆದ ರೂ. 1,00,000 ಸಾಲ ಮರುಪಾವತಿಯಾದ ನಂತರ ರೂ.2,00,000ಗಳ ಸಾಲವನ್ನು ಶೇ.5 ಬಡ್ಡಿ ದರದಲ್ಲಿ ನೀಡಲಾಗುವುದು ಹಾಗೂ ತಾವು ತಯಾರಿಸಲ್ಪಡುವ ಉತ್ಪನ್ನಗಳಿಗೆ ಮಾರುಕಟ್ಟೆ ಸೌಲಭ್ಯ ಒದಗಿಸಲಾಗುವುದು. ಕುಶಲಕರ್ಮಿಗಳು ಸಂಬಂಧಿಸಿದ ತಮ್ಮ ಗ್ರಾಮ ಪಂಚಾಯತ್/ ಪಟ್ಟಣ ಪಂಚಾಯಿತಿ/ ತಾಲ್ಲೂಕು/ ಜಿಲ್ಲಾ ಮಟ್ಟದ ವ್ಯಾಪ್ತಿಯಲ್ಲಿ ಸ್ಥಾಪಿತವಾಗಿರುವ ಸಾಮಾನ್ಯ ಸೇವಾ ಕೇಂದ್ರದಲ್ಲಿ ತ್ವರಿತವಾಗಿ ನೋಂದಣಿ ಮಾಡಿಕೊಳ್ಳಬಹುದು.


 

 

 

 

Comments

Popular posts from this blog

ಇಂದಿಗೂ ಹನುಮಂತ ವಾಸವಾಗಿರುವ 7 ಸ್ಥಳಗಳು

  ಇಂದಿಗೂ ಹನುಮಂತ  ವಾಸಿಸುತ್ತಿದ್ದಾನೆಂದು ಹೇಳಲಾಗುವ 7 ಸ್ಥಳಗಳು ಹನುಮಂತ ಎಂದಿಗೂ ಹೊರಟು ಹೋಗಲಿಲ್ಲ ಎಂದು ನಾನು ನಿಮಗೆ ಹೇಳಿದರೆ ಏನಾಗುತ್ತದೆ ? ಪ್ರಪಂಚದ ಗುಪ್ತ ಮೂಲೆಗಳಲ್ಲಿ , ಅವನ ಉಪಸ್ಥಿತಿಯನ್ನು ಇನ್ನೂ ಅನುಭವಿಸಬಹುದು , ಅವನ ಆಶೀರ್ವಾದಗಳನ್ನು ಇನ್ನೂ ಪಡೆಯಲಾಗುತ್ತದೆ ಮತ್ತು ಅವನ ಶಕ್ತಿಯನ್ನು ನಿಜವಾಗಿಯೂ ಹುಡುಕುವವರು ಇಂದಿಗೂ ಅವನನ್ನು ನೋಡತ್ತಾರೆ ?" ಹಿಂದೂ ಪುರಾಣದ ಹೆಚ್ಚಿನ ದೇವರುಗಳು ಮಾನವನ ವ್ಯಾಪ್ತಿಗೆ ಮೀರಿದ ಆಕಾಶ ಲೋಕಗಳಲ್ಲಿ ವಾಸಿಸುತ್ತಾರೆ . ಆದರೆ ಭಗವಾನ್ ಹನುಮಂತ ವಿಭಿನ್ನ . ಅವನು ಒಬ್ಬ ಭೂಮಿಯ ಮೇಲೆ ಶಾಶ್ವತ ಜೀವನದ ವರವನ್ನು ಪಡೆದ ಅಮರ ಜೀವಿ ( ಚಿರಂಜೀವಿ ). ಭಗವಾನ್ ರಾಮನ ಮೇಲಿನ ಅವನ ಭಕ್ತಿ ಎಷ್ಟು ಶುದ್ಧವಾಗಿತ್ತೆಂದರೆ , ರಾಮನ ಕೊನೆಯ ಭಕ್ತನ   ಆರೈಕೆ ಮಾಡುವವರೆಗೂ ಈ ಲೋಕವನ್ನು ಎಂದಿಗೂ ಬಿಡುವುದಿಲ್ಲ ಎಂದು ಅವನು ಪ್ರತಿಜ್ಞೆ ಮಾಡಿದನು . ಇದರರ್ಥ , ಇಂದಿಗೂ ಸಹ , ಹನುಮಂತನು ತನ್ನ ಭಕ್ತರನ್ನು ನಿಗೂಢ ರೀತಿಯಲ್ಲಿ ನೋಡುತ್ತಾನೆ , ರಕ್ಷಿಸುತ್ತಾನೆ ಮತ್ತು ಮಾರ್ಗದರ್ಶನ ಮಾಡುತ್ತಾನೆ . ಆದರೆ ಅವನು ನಿಖರವಾಗಿ ಎಲ್ಲಿ ವಾಸಿಸುತ್ತಾನೆ ? ಶತಮಾನಗಳಿಂದ , ಸಂತರು , ಯೋಗಿಗಳು ಮತ್ತು ಭಕ್ತರು ಹನುಮನ ಸಾನ್ನಿಧ್ಯವು ನಿಸ್ಸಂದೇಹವಾಗಿರುವ ಸ್ಥಳಗಳ ಬಗ್ಗೆ ಮಾತನಾಡಿದ್ದಾರೆ . ಇವು...

Happy And Beautiful Relationship Really Make you Gain Weight? ಸಂತೋಷ ದಿಂದ ಕೂಡಿದ ಸಂಬಂಧದಲ್ಲಿರುವುದು ನಿಜವಾಗಿಯೂ ನಿಮ್ಮ ತೂಕವನ್ನು ಹೆಚ್ಚಿಸುತ್ತದೆಯೇ?

ಸಂತೋಷದ ಸಂಬಂಧದಲ್ಲಿರುವುದು ನಿಜವಾಗಿಯೂ ನಿಮ್ಮ ತೂಕವನ್ನು ಹೆಚ್ಚಿಸುತ್ತದೆಯೇ ?   ಒಬ್ಬ ಮಹಿಳೆ ತನ್ನ ಸಂಗಾತಿಯೊಂದಿಗೆ ಸುರಕ್ಷಿತ ಎಂದು ಭಾವಿಸಿದಾಗ , ಒತ್ತಡದ ಹಾರ್ಮೋನ್ ಕಾರ್ಟಿಸೋಲ್ ಮಟ್ಟವು ಕಡಿಮೆಯಾಗುತ್ತದೆ , ಆದರೆ ಇದಕ್ಕೆ ವಿರುದ್ಧವಾಗಿ , ಆಕ್ಸಿಟೋಸಿನ್ ಮತ್ತು ಸಿರೊಟೋನಿನ್ ಉತ್ಪಾದನೆಯು ಹೆಚ್ಚಾಗುತ್ತದೆ . ಈ ಸಮಯದಲ್ಲಿ ದೇಹವು ವಿಶ್ರಾಂತಿ ಪಡೆಯುತ್ತದೆ , ಶಕ್ತಿಯನ್ನು ಸಂಗ್ರಹಿಸುತ್ತದೆ ಮತ್ತು ಸಂಭವನೀಯ ಗರ್ಭಧಾರಣೆಗೆ ಸಿದ್ಧವಾಗುತ್ತದೆ . ಈ ಪ್ರಕ್ರಿಯೆಯಲ್ಲಿ , ಚಯಾಪಚಯ ಕ್ರಿಯೆ ನಿಧಾನವಾಗುತ್ತದೆ ಮತ್ತು ಹಸಿವು ಹೆಚ್ಚಾಗುತ್ತದೆ . ಈ ಎಲ್ಲಾ ಬದಲಾವಣೆಗಳು ಸ್ವಾಭಾವಿಕವಾಗಿ ಸಂಭವಿಸುತ್ತವೆ ," ಎಂದು doctor.novik ಎಂಬ ಬಳಕೆದಾರಹೆಸರಿನಿಂದ ಕರೆಯಲ್ಪಡುವ ಸಮಗ್ರ ವೈದ್ಯೆ ಮತ್ತು ' ಬಯೋಹ್ಯಾಕರ್ ' ಕೇಟ್ ನೊವಾಯಾ ವಿವರಿಸುತ್ತಾರೆ . ಮಹಿಳೆಯರು ಆರೋಗ್ಯಕರ ಸಂಬಂಧದಲ್ಲಿರುವಾಗ ಹೆಚ್ಚಾಗಿ ತೂಕ ಹೆಚ್ಚಾಗುತ್ತಾರೆ ಎಂದು ಅವರು ತಮ್ಮ ಪೋಸ್ಟ್ ‌ ನಲ್ಲಿ ಸೂಚಿಸಿದ್ದಾರೆ . ಸಂಬಂಧದ ಸಮಯದಲ್ಲಿ ಮಹಿಳೆ ಗಮನಾರ್ಹವಾಗಿ ತೂಕ ಇಳಿಸಿಕೊಂಡರೆ , ಅವರು ಆರೋಗ್ಯಕರ ಸಂಬಂಧದಲ್ಲಿಲ್ಲದಿರುವ ಸಾಧ್ಯತೆ 90 ಪ್ರತಿಶತ ಎಂದು ಅವರು ಹೇಳಿಕೊಂಡಿದ್ದಾರೆ . ಕೆಲವರು ಅವರ ಪೋಸ್ಟ್ ಅನ್ನು ಒಪ್ಪಿಕೊಂಡರೆ , ಇತರರು ಸಂಪೂರ್ಣವಾಗಿ ಒಪ್ಪಲ...